ಟ್ರೈಕ್ಲಿನಿಕ್ ವಿಭಾಗ -
	ಸ್ಫಟಿಕಗಳ ವೈಲಕ್ಷಣ್ಯಗಳನ್ನು ಅನುಸರಿಸಿ ಮಾಡಿರುವ ಗುಂಪುಗಳ ಪೈಕಿ ಆರನೆಯದು. ತ್ರಿನತಾಕ್ಷ ವಿಭಾಗ ಪರ್ಯಾಯನಾಮ. ಇಂಥ ಒಂದು ಹರಳಿನ ಕೇಂದ್ರದಲ್ಲಿ ಓರೆಕೋನಗಳಲ್ಲಿ ಸಂಧಿಸುವ ಮೂರು ಅಸಮಾಕ್ಷಗಳಿವೆ. ಇವುಗಳ ಪೈಕಿ ಎರಡು ಸಮತಲಾಕ್ಷಗಳು ಮತ್ತು ಮೂರನೆಯದು ಶೀರ್ಷಾಕ್ಷ. ಇವನ್ನು ಅನುಕ್ರಮವಾಗಿ  ಚಿ,b,ಛಿ, ಎಂದು ಗುರುತಿಸುತ್ತೇವೆ. ಸಾಧಾರಣವಾಗಿ ಛಿ- ಅಕ್ಷವನ್ನು ಊಧ್ರ್ವವಾಗಿ ನಿಲ್ಲಿಸುತ್ತೇವೆ. ಇದೇ ಶೀರ್ಷಾಕ್ಷ. ಮೂರು ಅಕ್ಷಗಳ ನಡುವಿನ ಕೋನಗಳು ಯಾವಾಗಲೂ ಲಂಬಕೋನಗಳಲ್ಲ ಎನ್ನುವುದನ್ನು  ಚಿ=b=ಛಿ(90o ಎಂದು ಸೂಚಿಸುತ್ತೇವೆ. ಈ ವಿಭಾಗದ ಹರಳುಗಳಲ್ಲಿ ಸಮಸೂತ್ರ ಕೇಂದ್ರಮಾತ್ರವಿದ್ದು, ಪ್ರಮುಖ, ಉಪಸಮಸೂತ್ರ ಸಪಾಟಗಳಾಗಲಿ ಸಮಸೂತ್ರ ಅಕ್ಷಗಳಾಗಲಿ ಇರುವುದಿಲ್ಲ.

	ತ್ರಿನತಾಕ್ಷ ವಿಭಾಗದ ಹರಳುಗಳನ್ನು ಪ್ರಸಾಮಾನ್ಯ (ನಾರ್ಮಲ್) ವರ್ಗ ಅಥವಾ ಪರಿಪೂರ್ಣಮುಖಿವರ್ಗ ಮತ್ತು ಅಸಮ ಸೂತ್ರವರ್ಗಗಳಾಗಿ ಪುನರ್ವಿಂಗಡಿಸಲಾಗಿದೆ. ಈ ಎರಡೂ ವರ್ಗಗಳಲ್ಲಿ ಅವುಗಳ ಗುಣಗಳನ್ನು ತೋರುವ ಮಾದರಿ ಸ್ಫಟಿಕಗಳುಂಟು. ಹಾಗೆಯೇ ಅವುಗಳ ಸಮಸೂತ್ರತೆಯೆಂದೂ ಅಸಮಸೂತ್ರ ವರ್ಗಕ್ಕೆ ಕ್ಯಾಲ್ಸಿಯಮ್ ತಯೋಸಲ್ಫೇಟ್ ಮಾದರಿ ಅಥವಾ ಅಪೂರ್ಣಮುಖಿ ವರ್ಗವೆಂದೂ ಹೆಸರು. ಆಕ್ಸಿನೈಟ್ ವರ್ಗದ ಹರಳುಗಳಲ್ಲಿ ಸಮಸೂತ್ರ ಕೇಂದ್ರದ ವಿನಾ ಯಾವ ಸಮಸೂತ್ರ ಲಕ್ಷಣವೂ ಇರುವುದಿಲ್ಲ. ಈ ವರ್ಗದ ಮಾದರಿ ಸ್ಫಟಿಕವೆಂದರೆ ಆಕ್ಸಿನೈಟ್. ಅಸಮಸೂತ್ರತೆ ಪ್ರಕೃತಿಯ ಯಾವ ಖನಿಜದಲ್ಲಿಯೂ ಕಂಡುಬಂದಿಲ್ಲವಾದರೂ ಹಲವಾರು ಕೃತಕ ಉಪ್ಪುಗಳು ಈ ಲಕ್ಷಣಗಳನ್ನು ಪಡೆದು ಸ್ಫಟಿಕೀಕರಿಸಿವೆ. ಅಂತೂ ಇದು ಒಂದು ಶಕ್ಯವರ್ಗ. ಆದ್ದರಿಂದ ಮೂವತ್ತೆರಡು ಮಾದರಿ ಹರಳು ರೂಪಗಳಲ್ಲಿ ಇದು ಬಲುಸಾಮಾನ್ಯ ರೀತಿಯದು. ಈ ವರ್ಗದ ಹರಳುಗಳಲ್ಲಿ ಯಾವ ಸಮಸೂತ್ರ ಲಕ್ಷಣಗಳೂ ಇರುವುದಿಲ್ಲ. ಪ್ರತಿಯೊಂದು ರೂಪದಲ್ಲೂ ಕೇವಲ ಒಂದು ಮುಖ ಮಾತ್ರ ಇರುವುದು. ಮೇಲಾಗಿ ಈ ವರ್ಗದ ಹರಳುಗಳಲ್ಲಿ ಬೆಳಕು ವತುಲೀಯ ಧ್ರುವೀಕರಣಗೊಳ್ಳುತ್ತದೆ. 

	ತ್ರಿನತಾಕ್ಷ ವಿಭಾಗದ ಪರಿಪೂರ್ಣ ಮುಖವರ್ಗವನ್ನು ಮಾತ್ರ ಇಲ್ಲಿ ವಿವರಿಸಿದೆ. ಇದರಲ್ಲಿ ಏಳು ರೂಪಗಳಿವೆ. ಪ್ರತಿಯೊಂದು ರೂಪದಲ್ಲೂ ಎರಡು ಸದೃಶ ಮುಖಗಳುಂಟು. ಎರಡು ಮುಖಗಳೂ ಒಂದಕ್ಕೊಂದು ಸಮಾಂತರವಾಗಿವೆ. ಇವು ಸಮಸೂತ್ರ ಕೇಂದ್ರದಿಂದ ಸಮದೂರದಲ್ಲಿವೆ. ಏಳು ರೂಪಗಳು ಮತ್ತು ಅವುಗಳ ವೈಸ್ ಪ್ರತೀಕಗಳು ಹೀಗಿವೆ :

	ಈ ಹರಳು ವಿಭಾಗದಲ್ಲಿ ಶಿಲೋತ್ಪತ್ತಿಗೆ ಬಲುಮುಖ್ಯವಾದ ಖನಿಜಗಳು ಸೇರಿವೆ. ಅವುಗಳಲ್ಲಿ ಮುಖ್ಯವಾದವು ಮೈಕ್ರೊಕ್ಲಿನ್ ಮತ್ತು ಅನಾರ್ಥೊಕ್ಲೇಸ್ ಫೆಲ್ಡ್‍ಸ್ಪಾರ್ ಖನಿಜಗಳು. ಕೈನೈಟ್ ಮುಖ್ಯವಾದ ಘರ್ಷಕಗಳಲ್ಲೊಂದು. ಹಾಗೆಯೇ ರ್ಹೊಡೊನೈಟ್, ಬಾಬಿಂಗ್, ಟೊನೈಟ್, ಅನಿಗ್ಮಟೈಟ್ ಮತ್ತು ಲೆಂಗೆನ್ ಕೈಟ್ ಶಿಲೆಗಳಲ್ಲಿ ವಿಶೇಷ ಖನಿಜಗಳು.
(ಎಂ.ಎನ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ